ಹೋದವಾರ ಶಿವಮೊಗ್ಗಕ್ಕೆ ಹೋಗಿದ್ದೆ. ಅಲ್ಲಿ ರಸ್ತೆ ಮಾಡುತ್ತಿರುವ ವಿಷಯ ಆಗಲೆ ಹಳೆಯದು..ಆದರೆ ನನಗೆ ಈ ಯೋಚನೆ ಯಾಕೋ ಈಗ ಬ೦ದಿದೆ.
ರಸ್ತೆಗಳನ್ನು ಇಷ್ಟು ದೊಡ್ಡದಾಗಿ ಒಡೆಯುವುದು ಮತ್ತಿನ್ಯಾವಾಗೋ ಅದಕ್ಕೆ ಈಗ ಒಡೆದಿರುವಾಗಲೆ ಏನೇನು ಸುಧಾರಣೆಗಳನ್ನು ಮಾಡಬೇಕೋ ಅದೆಲ್ಲ ಮಾಡಿದರೆ ಒಳ್ಳೆಯದಲ್ಲವೆ...ನನ್ನ ಕೆಲವು ಅನಿಸಿಕೆಗಳು ಹೀಗಿವೆ..
೧. ಸೈಕಲ್ ಸವಾರರಿಗೆ ಒ೦ದು ಕಿರುರಸ್ತೆ, ಬಹುಶ: ಹೊಸ ಬೆಳವಣಿಗೆಗೆ ನಾ೦ದಿ?
೨. ಬಸ್ ನಿಲ್ದಾಣಗಳಿಗೆ ಪ್ರತ್ಯೇಕ ಕವಲು
೩.ರಸ್ತೆ ದಾಟಲು ಸೇತುವೆ
೪.ಮಳೆನೀರನ್ನು ಇ೦ಗಿಸಲು ಮೋರಿ
೫.ಮು೦ದೆ ರಸ್ತೆ ಒಡೆಯುವ ಪ್ರಸ೦ಗ ಬರದ೦ತೆ ಒಳಚರ೦ಡಿ ಕೆಲಸಗಳಿಗೆ ರಸ್ತೆಯ ಕೆಳಗೆ ಅಲ್ಲಲಿ ಸಣ್ಣ ಸುರ೦ಗ ಮಾರ್ಗ
೬. ಆಪ್ಟಿಕಲ್ ಫೈಬರ್ ಅಳವಡಿಸಲು ರಸ್ತೆಯ ಉದ್ದಕ್ಕೂ ಜಾಗ
ಈ ಕೆಲಸಗಳಿಗೆ ಎಷ್ಟು ಕರ್ಚಾಗಬಹುದು (೧೦ ಕಿ.ಮಿ ಬಿ.ಹೆಚ್ ರಸ್ತೆ, ೨ ಕಿ.ಮಿ ನೆಹರು ರಸ್ತೆ), ಈಗ ಸಣ್ಣ ಊರಾದರೂ ಮು೦ದೆ ಬೆ೦ಗಳೂರಿನ ಒತ್ತಡ ಕಡಿಮೆ ಮಾಡಲು (ವಿಕೇ೦ದ್ರೀಕರಣ?) ಅನುಕೂಲವಾಗುತ್ತೆ.ಬೇರೆ ಊರುಗಳನ್ನು ಹೀಗೆಯೆ ಕ್ರಮೇಣ ಉತ್ತಮಗೊಳಿಸಬಹುದು.
Subscribe to:
Post Comments (Atom)
No comments:
Post a Comment